|ಕುತಂಪಳ್ಳಿ ಸೀರೆ [[]] ಕುತಂಪಳ್ಳಿ ಸೀರೆಯು ಕೇರಳದ ತ್ರಿಶೂರ್ ಜಿಲ್ಲೆಯ ಕುತಂಪಳ್ಳಿ ಎಂಬ ಹಳ್ಳಿಯಲ್ಲಿ ತಯಾರಾಗುವ ಒಂದು ವಿಶಿಷ್ಟ ಬಗೆಯ ಸೀರೆ.ಇದನ್ನು ಇದರ ವಿಶಿಷ್ಟ ಬಗೆಯ ಅಂಚಿನಿಂದ ಗುರುತಿಸುತ್ತಾರೆ.ಇದರಲ್ಲಿ ಅರ್ದ ಜರಿಯ ಅಂಚು ಇರುತ್ತದೆ. == ಚರಿತ್ರೆ == ಈ ಸೀರೆಗಳನ್ನು ಕರ್ನಾಟಕದಿಂದ ಶತಮಾನಗಳ ಹಿಂದೆ ವಲಸೆ ಬಂದ ದೇವಾಂಗ ಸಮಾಜದ ಸದಸ್ಯರು ಕೈಯಲ್ಲಿ ನೇಯುತ್ತಾರೆ. ೧೯೭೨ರಲ್ಲಿ ಕುತಂಪಳ್ಳಿ ಕೈಮಗ್ಗದ ಕೆಲಸಗಾರರು ೧೦೨ ಜನ ಸದಸ್ಯಬಲದೊಂದಿಗೆ ಒಂದು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರು.ಈಗ ಇದರ ಸದಸ್ಯ ಬಲ ೮೧೪ ಆಗಿದ್ದು ಸ್ವಂತ ಕಟ್ಟಡವನ್ನು ಹೊಂದಿದೆ.೨೦೧೧ರಲ್ಲಿ ಈ ಬಗೆಯ ವಿಶಿಷ್ಟ ಸೀರೆಗಳಿಗೆ ಭಾರತದ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==